
ಆಲೂರು, ಸಕಲೇಶಪುರ ಬೇಲೂರು, ಮೂಡಿಗೆರೆ , ಅರಕಲಗೂಡು, ಮಡಿಕೇರಿ ಭಾಗದಲ್ಲಿ ರೈತರು ಹಾಗೂ ಕೂಲಿಕಾರ್ಮಿಕರಿಗೆ ಪ್ರತಿನಿತ್ಯ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಮ್ಮ ಸಂಘಟನೆಯ ವತಿಯಿಂದ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಕಾರ್ಯಕರ್ತರ ವತಿಯಿಂದ ರೈತರ ಪರವಾಗಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ ಕೆ ಶಿವಕುಮಾರ್ ರವರಿಗೆ ಚುನಾವಣೆಯ ಪೂರ್ವದಲ್ಲಿ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನೆಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕರವೇ ಕಾರ್ಯಕರ್ತರು ಮನವಿಯನ್ನು ಆನೆ ಹಾವಳಿಯಿಂದ ಈ ಭಾಗದಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ ಕರವೇ ವತಿಯಿಂದ ಬೃಹತ್ ಮಟ್ಟದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ , ನಿರಂತರ ಧರಣಿ ಸತ್ಯಾಗ್ರಹ ಮಾಡಿದ್ದೆವು ಈ ವಿಷಯ ಪತ್ರಿಕೆಗಳಲ್ಲಿ, ಹಾಗೂ ದೃಶ್ಯ ಮಾಧ್ಯಮದಲ್ಲಿ ಎಲ್ಲಾ ಜನಪ್ರತಿನಿಧಿಗಳು ಕೂಡ ನೋಡಿಯೂ ಕೂಡ ಮಲೆನಾಡಿನ ರೈತರ ಉಳಿವಿಗಾಗಿ ಕಾಂಗ್ರೆಸ್ ಸರ್ಕಾರವು ಆನೆ ಮತ್ತು ಮಾನವ ಸಂಘರ್ಷದ ಸಮಸ್ಯೆ ಪರಿಹಾರಕ್ಕೆ ಬಜೆಟ್ ನಲ್ಲಿ ಹಣ ಮಿಸಲಿಟ್ಟದಿರುವುದು ಹೋರಾಟಗಾರರಿಗೆ ನೋವುಂಟು ಮಾಡಿದೆ ಎಂದು ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಅವರು ಅಸಮದಾನ ವ್ಯಕ್ತಪಡಿಸಿದ್ದಾರೆ.
