
ಸಕಲೇಶಪುರ : ಮಲೆ ನಾಡಿನಾದ್ಯಂತ ಮುಂಗಾರು ಪ್ರಾರಂಭಗೊಂಡಿದ್ದು ರೈತರು ಗದ್ದೆ ನಾಟಿಗೆ ಹೊಸ ವಿಧಾನದಲ್ಲಿ ಮನೆಯ ಅಂಗಳದಲ್ಲಿಯೇ ಭತ್ತ ಬಿತ್ತನೆ ಮಾಡುತ್ತಿದ್ದಾರೆ.ಹೌದು ಈಗಾಗಲೇ ಮಲೆನಾಡು ಭಾಗವಾದ ಸಕಲೇಶಪುರ ತಾಲೂಕಿನಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು ಭತ್ತ ಬೆಳೆಯುವ ರೈತರು ತಮ್ಮ ಮನೆಯ ಅಂಗಳದಲ್ಲೇ ಭತ್ತದ ಸಸಿ ಮಡಿ ಮಾಡಿ ನಂತರ ಗದ್ದೆಯಲ್ಲಿ ಆಧುನಿಕ ತಂತ್ರಜ್ಞಾನದ ವಿಧಾನವನ್ನು ಅನುಸರಿಸಿ 1 ಎಕರೆಗೆ ಕೇವಲ 20 ಕೆ.ಜಿ.ಭತ್ತ ನಾಟಿ ಮಾಡಲು ತಗಲುತ್ತದೆ ಎಂದು ಹೇಳಲಾಗುತ್ತದೆ ,ಆದರೆ ಗದ್ದೆಯಲ್ಲಿ ನಾಟಿ ಮಾಡಿದರೆ 1 ಎಕರೆಗೆ 50 ಕೆ.ಜಿ. ಭತ್ತ ಬೇಕಾಗುತ್ತದೆ ಎಂದು ಕೃಷಿ ತಜ್ಞರು ಹೇಳುತ್ತಾರೆ ,ಈ ವಿಧಾನದ ಆಧುನಿಕ ಬತ್ತದ ನಾಟಿ ಮಾಡುವುದರಿಂದ ರೈತರು ಕಡಿಮೆ ಭತ್ತದ ನಾಟಿ ಮಾಡುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಭತ್ತಬೆಳೆಯಬಹುದಾಗಿದೆ ಎಂದು ಬಾಗರಹಳ್ಳಿ ಬಿ.ಆರ್.ವೆಂಕಟೇಶ್ ಹೇಳುತ್ತಾರೆ.





