
ಸಕಲೇಶಪುರ : ಹೇಮಾವತಿ ನದಿಯಲ್ಲಿ ವ್ಯಕ್ತಿಯ ಶವ ತೆಲಾಡುತ್ತಿರುವ ದೃಶ್ಯ ಕಂಡು ಬಂದಿದೆ, ಇಂದು ಮಧ್ಯಾಹ್ನ ಈ ಶವವನ್ನು ಸ್ಥಳೀಯರು ಕಂಡಿದ್ದಾರೆ. ಮೃತ ಪಟ್ಟ ವ್ಯಕ್ತಿ ಯಾರೆಂದು ಇನ್ನೂ ಕೂಡ ತಿಳಿದು ಬಂದಿಲ್ಲ.ಮೃತದೇಹ ನೀರಲ್ಲಿ ತೇಲಾಡುತ್ತಿದ್ದು ಮೃತ ಪಟ್ಟ ವ್ಯಕ್ತಿ ಟೈ ಹಾಗೂ ಶೂ ದರಿಸಿದ್ದಾರೆ ಎಂದು ತಿಳಿದು ಬಂದಿದೆ. ಪೋಲೀಸರು ತನಿಖೆ ಮುಂದುವರೆಸಿದ್ದು ಮೃತ ಪಟ್ಟ ವ್ಯಕ್ತಿ ಯಾರೆಂದು ಪೊಲೀಸರ ತನಿಖೆಯಿಂದ ಪತ್ತೆಯಾಗಬೇಕಾಗಿದೆ.
