
ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪಲ್ಲವಿ ಎಸ್ಟೇಟ್ ನಲ್ಲಿ ಕಟಾವು ಮಾಡಿ ರಸ್ತೆ ಬದಿಯಲ್ಲಿ ಹಾಕಿದ ಸಿಲ್ವರ್ ಮರವನ್ನು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿದ ಪ್ರಕರಣ ನಡೆದಿದೆ.
ಕಟಾವು ಮಾಡಿ ರಸ್ತೆ ಬದಿಯಲ್ಲಿ ಹಾಕಿದ ಮರ ಸುಮಾರು ಎರಡು ಲೋಡ್, ಅಂದಾಜು ವೆಚ್ಚ ಒಂದು ಲಕ್ಷ ರೂಪಾಯಿ ಮೌಲ್ಯದ ಸಿಲ್ವರ್ ಮರ ಎಂದು ಪಲ್ಲವಿ ಎಸ್ಟೇಟ್ ಮಾಲೀಕರಾದ ಶ್ರೀನಿವಾಸ ತಿಳಿಸಿದ್ದಾರೆ.
