
ಸಕಲೇಶಪುರ.ತಾಲ್ಲೂಕಿನ ಬಾಳ್ಳುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಮಾಡುವುದರ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು,ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .
ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಉಮೇಶ್ ಬಾಳ್ಳುಪೇಟೆ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ಸ್ವಾಮಿ, ಸದಸ್ಯರುಗಳಾದ ಸಂಜು, ಶಿಲ್ಪ ಮಲ್ಲಿಕ್, ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ, ದರ್ಶನ ಪೂಜಾರಿ, ಕರವೇ ದಿನೇಶ್,ಕನ್ನಡ ಸಾಹಿತ್ಯ ಪರಿಷತ್ ನೇತ್ರ ಮಂಜುನಾಥ, SDMC ಅಧ್ಯಕ್ಷರಾದ ಸುರೇಶ್, ಉಪಾಧ್ಯಕ್ಷರಾದ ವನಜಾಕ್ಷಿ, ಗ್ರಾಮದ ಗಣ್ಯರು, ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಭಾಗವಹಿಸಿದ್ದರು.



