
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಾಗರ್ ಜಾನೇಕೆರೆ ರವರನ್ನು ವಿನಾ ಕಾರಣ ಬಂಧಿಸಿರುವುದು ಖಂಡನಾರ್ಹ.
ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬ ಪ್ರಜೆಗೆ ಇದೆ. ಇಲ್ಲ ಸಲ್ಲದ ನೆಪ ಒಡ್ಡಿ ಸಾಗರ್ ಜಾನೇಕೆರೆ, ಯಡೆಹಳ್ಳಿ ಮಂಜುನಾಥ್ ಒಳಗೊಂಡಂತೆ 11 ಮಂದಿಯನ್ನು ವಿನಾ ಕಾರಣ ಬಂಧಿಸಿ ಸೆರೆಯಲ್ಲಿ ಇಟ್ಟಿರುವುದು ಖಂಡನಾರ್ಹ.
ಈ ಕೂಡಲೇ ಇವರನ್ನು ಬಿಡುಗಡೆಗೊಳಿಸಬೇಕೆಂದು ನನ್ನ ಮನವಿ. ಅಜಿತ್ ಕುಮಾರ್ ಎಂ. ರಾಜ್ಯ ಸಂಘಟನಾ ಕಾರ್ಯದರ್ಶಿ, ಮಲೆನಾಡು ರಕ್ಷಣಾ ಸೇನೆ ಕರ್ನಾಟಕ
