
ಹಾಸನ : ನಗರದ ಆಚಾರ್ಯ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹರ್ಷಿಲ್(16) ಅಪಘಾತದಲ್ಲಿ ತಲೆಗೆ ತೀವ್ರ ತರವಾದ ಪೆಟ್ಟು ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು, ಇವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಈತನ ಕುಟುಂಬ ಎಂಟು ಜನರ ಬಾಳಿಗೆ ಬೆಳಕಾಗಿದೆ.
ಹರ್ಷಿಲ್ ಅವರ ಹೃದಯ ಜಯದೇವ ಆಸ್ಪತ್ರೆಗೆ, ಏಸ್ಟರ್ ಆಸ್ಪತ್ರೆಗೆ ಲಿವರ್, ಬಿಜಿಎಸ್ ಗೆ ಕಿಡ್ನಿ, ಚೆನ್ನೈನ ಆಸ್ಪತ್ರೆಗೆ ಶ್ವಾಸಕೋಶ ದಾನ ಮಾಡಲಾಗಿದೆ.
ಕೋವಿಡ್ ಸಂದರ್ಭದಲ್ಲಿ ತಂದೆ ತಾಯಿ ಇಬ್ಬರನ್ನು ಹರ್ಷಿಲ್ ಕಳೆದುಕೊಂಡು ಅಜ್ಜಿಯ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು ಎಂದು ಹೇಳಲಾಗಿದೆ.




