
ಸಕಲೇಶಪುರ : ಕಸಬಾ ಹೋಬಳಿ ಹಲಸುಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲಾ ಆವರಣದ 100 ಮೀಟರ್ ಒಳಗೆ ಕೆಲವು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಇದರಿಂದಾಗಿ ಶಾಲಾ ಆವರಣದಲ್ಲಿ ಎಲ್ಲಂದರಲ್ಲಿ ಮದ್ಯದ ಬಾಟಲಿಗಳು ಬಿದ್ದು ಶಾಲಾ ಆವರಣದ ಶುಚಿತ್ವ ಹಾಳಾಗುತ್ತಿರುವುದರಿಂದ ಗ್ರಾಮ ಪಂಚಾಯತಿ ಮತ್ತು ಅಬಕಾರಿ ಇಲಾಖೆಯವರು ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಶಾಲಾ ಎಸ್.ಡಿ.ಎಂ.ಸಿ ಆಡಳಿತ ಮಂಡಳಿಯ ವತಿಯಿಂದ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಶೋಭಾ ಕೆಂಪೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾದ್ಯಕ್ಷ ಚಂದಗರು ಎಸ್.ಡಿ.ಎಂ.ಸಿ.ಅದ್ಯಕ್ಷರಾದ ಮೀನಾಕ್ಷಿ, ಸದಸ್ಯರಾದ ಆನಂದ್, ಸಂತೋಷ , ಕಿರಣ್, ಗೀತ, ಹಾಗೂ ಗ್ರಾಮಸ್ಥರು ಇದ್ದರು.


