
ಆಲೂರು : ಆಲೂರಿನ ಕಲ್ವಿರ್ ಪ್ರೌಢಶಾಲೆಯಲ್ಲಿ ಸ್ನೇಹಿತರ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವು ಅದ್ದೂರಿಯಾಗಿ ಇಂದು ನೆಡೆಯಿತ್ತು .
ಈ ಶಾಲೆಯು 1985ನೆ ಇಸವಿಯಲ್ಲಿ ಪ್ರಾರಂಭವಾಗಿ ಆಲೂರು ತಾಲ್ಲೂಕಿನ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ ಕಲ್ವಿರ್ ಪ್ರೌಢಶಾಲೆಗೆ ಸಲ್ಲಿಸಬೇಕಾಗದ ಗೌರವ ಎಂದು ಹಳೆಯ ವಿದ್ಯಾರ್ಥಿಗಳು ನೆನಪಿಸಿದರು.
ಈ ಸಂದರ್ಭದಲ್ಲಿ ಶಾಲೆ ಪ್ರಾರಂಭದಿಂದ ಇಲ್ಲಿಯವರಗೆ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ಮಾಡಿದ 39ಜನ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.
1985ರವಿದ್ಯಾರ್ಥಿಗಳಿಂದ 2023ರ ವರಗಿನ 800 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದು ವಿಶೇಷವಾಗಿತ್ತು.




