
ಕೊಲಂಬೊ(ಸೆ.03) ಏಷ್ಯಾಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ತೀವ್ರ ಕುತೂಹಲ ಕೆರಳಿಸುತ್ತಿದೆ. ಆದರೆ ಮಹತ್ವದ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಗೆ ಆಹುತಿಯಾಗಿದೆ.
ಪಾಕಿಸ್ತಾನ ಹಾಗೂ ಶ್ರೀಲಂಕಾ ಏಷ್ಯಾಕಪ್ ಟೂರ್ನಿಗೆ ಆತಿಥ್ಯವಹಿಸಿದೆ. ಭಾರತದ ಪಂದ್ಯ, ಸೂಪರ್ 4 ಹಾಗೂ ಫೈನಲ್ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜಿಸಲಾಗಿದೆ. ಇನ್ನುಳಿದ ಲೀಗ್ ಪಂದ್ಯ ಪಾಕಿಸ್ತಾನ ಆಯೋಜಿಸಿದೆ. ಇದೀಗ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ.
ಏಷ್ಯಾಕಪ್ 2023 ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳು ಹಾಗೂ ಫೈನಲ್ ಪಂದ್ಯವನ್ನು ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗಿದೆ. ಕೊಲೊಂಬೊ ಹಾಗೂ ಪಲ್ಲಕೆಲೆಯಲ್ಲಿ ಮಳೆಯಾಗುತ್ತಿರುವ ಕಾರಣ ಪಂದ್ಯಗಳು ರದ್ದಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯ ರದ್ದಾಗಿದ್ದರೆ, ಭಾರತ ಹಾಗೂ ನೇಪಾಳ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಸೂಪರ್4 ಹಂತದ ಪಂದ್ಯಗಳನ್ನು ಕೊಲೊಂಬೊದಿಂದ ಹಂಬನತೋಟಾಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇನ್ನು ಫೈನಲ್ ಪಂದ್ಯವನ್ನೂ ಹಂಬನತೋಟಾಗೆ ಸ್ಥಳಾಂತರಿಸಲು ಎಸಿಸಿ ಮುಂದಾಗಿದೆ.
