
ಸಕಲೇಶಪುರ : ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಸುಭಾಷ್ ಮೈದಾನದಲ್ಲಿ ಉದ್ಘಾಟನೆ ಮಾಡಿದ ಶಾಸಕರಾದ ಸಿಮೆಂಟ್ ಮಂಜು.
ಈ ಸಂದರ್ಭದಲ್ಲಿ ಮಾತನಾಡಿದ ಸಕಲೇಶಪುರದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಕ್ರೀಡೆಯಲ್ಲಿ ಭಾಗವಹಿಸುದರಿಂದ ನಮ್ಮ ದೇಶದ ಕೀರ್ತಿಯನ್ನು ಅಂತರ್ ರಾಷ್ಟ್ರೀಯ ಗುರುತಿಸಬಹುದು, ಪ್ರಸ್ತುತ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ ಎಂದರು .
ಕಾರ್ಯಕ್ರಮದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಮೇಶ್, ತಾಲೂಕು ದೈಹಿಕ ಪರಿವೀಕ್ಷಕರಾದ ಕುಶವಂತ್ ಇತರರು ಇದ್ದರು.




