ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಜರುಗಿದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಕೆಪಿಎಸ್) ಹೆತ್ತೂರು ಉತ್ತಮ ಫಲಿತಾಂಶ ದಾಖಲಿಸಿದೆ.

3000, 1500, 800ಮೀ ಓಟದಲ್ಲಿ ಚಂದನ್ ಎರಡು ಪ್ರಥಮ ಮತ್ತು ಒಂದು ತೃತೀಯ, 3000ಮೀ. ಓಟದಲ್ಲಿ ಪುಷ್ಪ ಲತಾ ಪ್ರಥಮ ಮತ್ತು ಸ್ಪಂದನಾ ದ್ವಿತೀಯ, 1500ಮೀ ಓಟದಲ್ಲಿ ಶಾಲಿನಿ ದ್ವಿತೀಯ, 800ಮೀ ಓಟದಲ್ಲಿ ಪುಷ್ಪಲತಾ ದ್ವಿತೀಯ, 200ಮೀ ಓಟದಲ್ಲಿ ಪ್ರಮೋದ್ ಪ್ರಥಮ ಮತ್ತು ಪ್ರೇಂ ತೃತೀಯ, 400ಮೀ ಓಟದಲ್ಲಿ ನಿಶಾ ದ್ವಿತೀಯ, 1500ಮೀ ಓಟದಲ್ಲಿ ಮನ್ವಿತ್ ತೃತೀಯ ಸ್ಥಾನ ಪಡೆದಿದ್ದಾರೆ.

ಉದ್ದ ಜಿಗಿತದಲ್ಲಿ ಆದರ್ಶ್ ದ್ವಿತೀಯ ಹಾಗೂ ಪ್ರಮೋದ್ ತೃತೀಯ, ಹ್ಯಾಮರ್ ಥ್ರೋ ಪ್ರಜ್ವಲ್ ಪ್ರಥಮ ಸ್ಥಾನ ಪಡೆದರು.ಗುಂಪು ಸ್ಪರ್ಧೆಗಳಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದ ಖೋಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ವಿಜೇತರಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರಿನ ಶಾಲಾಭಿವೃದ್ಧಿ ಸಮಿತಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *