ಸಕಲೇಶಪುರ :- ಕರ್ನಾಟಕ ರಾಜ್ಯ ಆದಿ ದ್ರಾವಿಡ ಸೇವಾ ಸಂಘ ಹಾಸನ ಜಿಲ್ಲೆ ಹಾಗೂ ಸಕಲೇಶಪುರ ತಾಲೂಕು ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ರವಿ ನಾರಾಯಣ ಅವರನ್ನು ಹಾಗೂ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ರಮೇಶ್ ಬೆಳಗೋಡು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್ ಭಾಗ್ ಹೇಳಿದ್ದಾರೆ.

ಶನಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿದ್ದು ಅವರನ್ನು ಸಂಘಟಿತರನ್ನಾಗಿ ಒಗ್ಗೂಡಿಸಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಸ್ಥಾಪನೆ ಮಾಡಿದ್ದು ಈ ಸಂಘಟನೆಯನ್ನು ರಾಜ್ಯದ್ಯಂತ ಮಾಡುತ್ತಿದ್ದು ಇದೀಗ ಹಾಸನ ಜಿಲ್ಲೆಯ ಹಾಗೂ ಸಕಲೇಶಪುರ ತಾಲೂಕು ಒಳಗೊಂಡಂತೆ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕೊಡಗು ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ನಮ್ಮ ಸಮುದಾಯದ ಜನರು ಹೆಚ್ಚು ಇದ್ದು ಮುಂದಿನ ದಿನಗಳಲ್ಲಿ ಆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಅವಿದ್ಯಾವಂತರಾದ ನಮ್ಮ ಸಮುದಾಯದ ಜನರು ಜಾತಿಯನ್ನು ಸರಿಯಾದ ರೀತಿಯಲ್ಲಿ ದೃಢೀಕರಿಸದೆ ಸರ್ಕಾರದ ವತಿಯಿಂದ ಸಿಗುವಂತಹ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಅನೇಕ ಜನರು ಜಾತಿ ದೃಢೀಕರಣದ ಪ್ರಮಾಣ ಪತ್ರವನ್ನು ಹಾಗೂ ಇನ್ನು ಅನೇಕ ಜನರು ಪಡಿತರ ಚೀಟಿಗಳನ್ನು ಸಹ ಪಡೆಯದೆ ದೂರದ ಎಸ್ಟೇಟ್ ಗಳಲ್ಲಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದು ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರುಹಾಸನ ಜಿಲ್ಲಾದ್ಕಕ್ಷರಾಗಿ ಆಯ್ಕೆಯಾದ ರವಿ ನಾರಾಯಣ ಮಾತನಾಡಿ ಸಂಘವು ನನಗೆ ಜಿಲ್ಲೆಯಲ್ಲಿ ಪ್ರಮುಖವಾದ ಸ್ಥಾನವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಸಕಲೇಶಪುರ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಸಂಘಟನೆಯನ್ನು ಮಾಡುವ ಮೂಲಕ ತಾಲೂಕು ಘಟಕಗಳನ್ನು ರಚಿಸಲಾವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗೌರವ ಸಲಹೆಗಾರ ಸೋಮನಾಥ, ಮೋಹನ್ ನೆಲ್ಲಿ ಗುಂಡಿ, ರಮೇಶ್ ಬೆಳಗೋಡು , ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಬು ಜಾಲಸೂರ್, ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *