
ಈ ಭಾರಿಯ ಗೌರಿ ಗಣೇಶ ಹಬ್ಬವು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ರೇವಣ್ಣ ಕುಟುಂಬಕ್ಕೆ ಸಿಹಿ ಸುದ್ದಿಯನ್ನು ತಂದಿದ್ದು, ಕುಟುಂಬ ಸದಸ್ಯರ ಮೊಗದಲ್ಲಿ ಸಂತಸದ ನಗು ಮೂಡಿದೆ.
ಸುಳ್ಳು ಮಾಹಿತಿ ಸಲ್ಲಿಕೆ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ದಿನೇ ದಿನೇ ತನ್ನ ಅಸ್ವಿತ್ವವನ್ನ ಕಳೆದುಕೊಳ್ಳುತ್ತಿರುವ ಜೆಡಿಎಸ್ ಇದೀಗ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಇದ್ದ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನ ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು.
ಈ ಹಿನ್ನಲೆಯಲ್ಲಿ ಪ್ರಜ್ವಲ್ ವಕೀಲರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ನೀಡಲು ಅರ್ಜಿ ಸಲ್ಲಿಸಿದ್ದರು, ನಂತರ ನ್ಯಾಯಲಯ ಅರ್ಜಿಯನ್ನು ವಜಾಗೊಳಿಸಿತ್ತು.ಇದೀಗ ಹೊಸ ಸುದ್ದಿ ಹೊರ ಬಂದಿದ್ದು, ಗೌರಿ ಗಣೇಶ ಹಬ್ಬದಂದು ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ, ಜೊತೆಗೆ ಮುಂಬರುವ ಚುನಾವಣೆಗಳಲ್ಲಿ ನಿಲ್ಲಲು ಯಾವುದೇ ತಕರಾರಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಸಿಂಧು ಆದೇಶಕ್ಕೆ ತಾತ್ಕಾಲಿಕ ರಿಲೀಫ್ ಕೋರಿದ್ದ ಪ್ರಜ್ವಲ್ ರೇವಣ್ಣಗೆ ಜಯ ಸಿಕ್ಕಿದೆ. ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಧನಂಜಯ್ ಚಂದ್ರಚೂಡ್, ಪರಡಿವಾಲಾ, ಮನೋಜ್ ಮಿಶ್ರಾ ಮೂವರು ನ್ಯಾಯಾಧೀಶರಿದ್ದ ಪೀಠದಿಂದ ಈ ಆದೇಶ ಹೊರಡಿಸಲಾಗಿದೆ.
ಹೀಗಾಗಿ ಅನರ್ಹತೆ ಆದೇಶದಿಂದ ಪ್ರಜ್ವಲ್ ಪಾರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಚುನಾವಣಾ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಿಜೆಐ ಪೀಠದಲ್ಲಿ ವಿಚಾರಣೆ ನಡೆಯಿತು.ಈ ವೇಳೆ ಪ್ರಜ್ವಲ್ ರೇವಣ್ಣಾಗೆ ಸಂಸತ್ ಕಲಾಪಕ್ಕೆ ಭಾಗಿಯಾಗಲು ಸುಪ್ರೀಂ ಅವಕಾಶ ನೀಡಿದೆ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಗೂ ಸ್ಫರ್ಧೆಗೆ ಅವಕಾಶ ನೀಡಲಾಗಿದೆ. ಆದರೆ ಸಂಸತ್ ಭತ್ಯೆ ಬಳಸಲು ಸುಪ್ರಿಂ ಕೋರ್ಟ್ ಅನುಮಾತಿ ನೀಡಿಲ್ಲ.
