ಸಕಲೇಶಪುರ :- ನಗರದ ಬಾಳೆಗದ್ದೆ ಹೇಮಾವತಿ ನಗರ ಒಂದನೇ ವಾರ್ಡ್ ನ ನಿವಾಸಿ ಬಸವರಾಜುರವರ ಮನೆಯಲ್ಲಿ ಇಂದು 101 ಗಣಪತಿ ಮೂರ್ತಿ ಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಫ್ಲವರ್ ಡೆಕೊರೇಷನ್ ಕೆಲಸ ಮಾಡುವ ಬಸವರಾಜ್ ರವರು ತಮ್ಮ ಮನೆಯಲ್ಲಿ ವಿಶೇಷವಾಗಿ 101 ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರುವುದು ಸ್ಥಳೀಯ ನಿವಾಸಿಗಳಿಗೆ ಸಂತಸ ತಂದಿದೆ.

ಪಟ್ಟಣದ ಜನರಿಗೆ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷ ವಾಗಿತ್ತು,101 ಗಣೇಶನನ್ನು ನೋಡಲು ಸ್ನೇಹಿತ ವರ್ಗದವರು, ಬಂಧುಗಳು ಹಾಗೂ ಪಟ್ಟಣದ ಜನರು ಆಗಮಿಸುತ್ತಿರುವುದು ಸಂತಸ ತಂದಿದೆ ಎಂದು ಬಾಳೆಗದ್ದೆಯ ಫ್ಲವರ್ ಡೆಕೋರೇಷನ್ ಬಸವರಾಜ್ ತಿಳಿಸಿದ್ದಾರೆ..

ಈ ಸಂದರ್ಭದಲ್ಲಿ ಕುಟುಂಬದವರಾದ ಪುಷ್ಪಾವತಿ, ಮಂಜು, ಪ್ರಿಯ, ಮನು ,ನಾಗು ,ಹಾಗೂ ಸಂಬಂಧಿಕರು ಭಾಗಿಯಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *