
ಬೇಲೂರು :- ತಾಲ್ಲೂಕಿನ ಅರೇಹಳ್ಳಿಯ ಸರಕಾರಿ ಬಸ್ ನಿಲ್ದಾಣದ ಎದುರು ನೇಚರ್ ಕನ್ಸರ್ವೇಷನ್ ಫೌಂಡೇಶನ್ ಮೈಸೂರು, ಕರ್ನಾಟಕ ಅರಣ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆನೆ ಮತ್ತು ಜನರ ಹೊಂದಾಣಿಕೆ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಯಿತು.
ಆನೆ ಹಾಗೂ ಮಾನವರ ಹೊಂದಾಣಿಕೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಮೈಸೂರಿನಿಂದ ಆಗಮಿಸಿದಂತಹ ಪೃಥ್ವಿ ಕಲಾತಂಡದವರು ನಡೆಸಿಕೊಟ್ಟರು. ಪೃಥ್ವಿ ಕಲಾ ತಂಡದ ಸದಸ್ಯರು ಆನೆಯ ಮುಖವಾಡಗಳನ್ನು ಧರಿಸಿ ಬೀದಿ ನಾಟಕದಲ್ಲಿ ಅಭಿನಯಿಸಿ ನೋಡುಗರನ್ನು ಮಂತ್ರಮುಗ್ಧಗೊಳಿಸಿದರು. ಆನೆಗಳ ಕುರಿತು ಹಾಡುಗಳನ್ನು ಹಾಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು.
ನೂರಾರು ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಿ ಅರಣ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು, ವಲಯಾರಣ್ಯಾಧಿಕಾರಿ ವಿನಯ್ ಕುಮಾರ್, ಹಾಸನ ಆನೆಕಾರ್ಯಪಡೆಯ ಅಧಿಕಾರಿ ಜಯಂತ್ ಕಾಮ್ರೆಕರ್, ಉಪ ವಲಯಣ್ಯಾಧಿಕಾರಿ ಗುರುರಾಜ್, ರೋಟರಿ ಸಂಸ್ಥೆಯ ಅಧ್ಯಕ್ಷ ರೋ.ಪೃಥ್ವಿ, ರೋ.ವಿನಾಯಕ್, ರೋ.ಚೇತನ್, ರೋ.ವಿನಯ್, ರೋ.ವಿಜಯ್, ರೋ.ಕಾರ್ತಿಕ್, ಎಟಿಎಫ್ ಮತ್ತು ಆರ್ ಅರ್ ಟಿ ಸಿಬ್ಬಂದಿಗಳು ಭಾಗವಹಿಸಿದ್ದರು.
17-10-2023ಊಖಓಂಖಐ01ಂ ಚಿತ್ರ ಸುದ್ದಿ: ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ನೇಚರ್ ಕನ್ಸರ್ವೇಷನ್ ಫೌಂಡೇಶನ್, ಕರ್ನಾಟಕ ಅರಣ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆನೆ ಮತ್ತು ಮಾನವ ಹೊಂದಾಣಿಕೆ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಯಿತು.
