ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿಯ ಬೊಬ್ಬನಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದಾಗಿ ನೆಮ್ಮದಿ ಜೀವನ ಸಾಗಿಸುವ ಪರಿಸ್ಥಿತಿ ಸದ್ಯಕ್ಕೆ ಸಾಧ್ಯವಿಲ್ಲ ಎಂಬುವುದು ಮತೊಮ್ಮೆ ಸಾಭಿತಾಗಿದೆ.

ಪ್ರತಿದಿನ ಕಾಡಾನೆಗಳಿಂದ ತಮ್ಮ ಬೆಳೆ ಹಾಗೂ ಪ್ರಾಣ ರಕ್ಷಣೆಗೆ ಹರ ಸಾಹಸ ಪಡುತ್ತಿರುವ ಗ್ರಾಮಸ್ಥರು, ಕಳೆದ ಐದು ದಿನಗಳ ಹಿಂದೆ ದಿಡೀರನೆ ಪ್ರತ್ಯಕ್ಷವಾದ ಕಾಳಿಂಗ ಸರ್ಪ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು .

ಇಂದು ಬೆಳಗ್ಗೆ ಮತ್ತೆ ಗ್ರಾಮಪಂಚಾಯಿತಿಯ ಜಾತಹಳ್ಳಿ ದೇವರಾಜುರವರ ಭತ್ತದ ಕಣದಲ್ಲಿ ಕಾಳಿಂಗ ಸರ್ಪವು ಕಾಣಿಸಿಕೊಂಡಿದ್ದು, ಕೂಡಲೇ ಗ್ರಾಮಸ್ಥರು ಅದನ್ನು ಹಿಡಿಯಲು ಸಕಲೇಶಪುರ ಉರಗತಜ್ಞರಾದ ಮಹಮ್ಮದ್ ಫರಹನ್ ಅವರನ್ನು ಸಂಪರ್ಕಿಸಿದರು.

ಕೂಡಲೇ ಸ್ಥಳಕ್ಕೆ ಬಂದ ಉರಗತಜ್ಞರು ಕಾಳಿಂಗ ಸರ್ಪವನ್ನು ಹಿಡಿಯಲು ಯಶಸ್ವಿಯಾದರು . ಕಾಳಿಂಗ ಸರ್ಪವು ಸುಮಾರು 14 ಅಡಿ ಉದ್ದದ, 10 ಕೆಜಿ ತೂಕವಿದ್ದು, ಅರಣ್ಯ ಇಲಾಖೆಯವರ ಸಮುಖದಲ್ಲಿ ಬಿಸ್ಲೆ ರಕ್ಷಿತರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟುಬಂದರು.

ಒಟ್ಟಾರೆ ಈ ವಳಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೊಬ್ಬನಹಳ್ಳಿ ಹಾಗೂ ಜಾತಹಳ್ಳಿ ಗ್ರಾಮಸ್ಥರಿಗೆ ಕಾಡುಪ್ರಾಣಿಗಳಿಂದ ನೆಮ್ಮದಿಯ ಜೀವನ ಸಾಗಿಸುವಂಥಾಗಿಲ್ಲ ಎಂಬುವುದು ಜಗತ್ತು ಜಾಹಿರವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *