
ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರ ಗೆಲುವಿಗೆ ಕಾರಣ ವಳಲಹಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿ ಕಾರ್ಯಕರ್ತರ ಸಂಭ್ರಮ.ಸಕಲೇಶಪುರ : ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜಣ್ಣ ಅವರು ಜಯಗಳಿಸಿದರು. ವಳಲಹಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿ ಕಾರ್ಯಕರ್ತರು ಸಿಮೆಂಟ್ ಮಂಜು ಅವರ ಜಯಕ್ಕೆ ಸಿಹಿ ಹಂಚಿ ಪಟಾಕಿ ಸಿಡಿಸಿ , ಡೋಲು ಮತ್ತು ಕಾಳೆ ಕೊಂಬು ತರಿಸಿ ವಳಲಹಳ್ಳಿ ಹಿರಿಯೂರು ಕೂಡಿಗೆ ವೃತ್ತದಲ್ಲಿ ಅಪಾರ ಜನ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಕುಣಿದು ಸಂಭ್ರಮ ಹಂಚಿಕೊಂಡರು.ಸಿಮೆಂಟ್ ಮಂಜು ಅವರ ಪರವಾಗಿ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಆರ್ ಎಸ್ ಎಸ್ , ಕಾರ್ಯಕರ್ತರು ಹಗಲು ರಾತ್ರಿ ಬಿಜೆಪಿ ಪರ ಮತಯಾಚನೆ ಮಾಡಿ ಗೆಲುವಿಗೆ ಕಾರಣಕರ್ತರಾಗಿದ್ದು ಕಾರ್ಯಕರ್ತರಲ್ಲಿ ಖುಷಿಯ ವಾತಾವರಣವನ್ನು ತಂದು ಕೊಟ್ಟಿದ್ದು.


