
ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಅವರಿಗೆ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಎಚ್ ಕೆ ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ .ಭಾನುವಾರ ಸಕಲೇಶಪುರ ಪಟ್ಟಣದಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಈ ಚುನಾವಣೆಯಲ್ಲಿ ಶ್ರಮವಹಿಸಿದ ಜೆಡಿಎಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳಿಗೆ ಅಭಿನಂದನೆ ಸಲ್ಲಿಸಿದರು ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳು ಧೃತಿಗೆಡುವುದು ಬೇಡ ನಾನು ಈ ಕ್ಷೇತ್ರದಲ್ಲಿ ಇದ್ದು ತಮ್ಮಗಳ ಸಮಸ್ಯೆಗೆ ಸ್ಪಂದಿಸುವುದಾಗಿ ಹೇಳಿದರುಹಣದ ಮುಂದೆ ಅಭಿವೃದ್ಧಿ ಕೆಲಸಗಳ ನೆನಪು ಮಾಡಿಕೊಳ್ಳದ ಜನತೆಯ ನಡತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು ಕುರ್ಚಿಗಾಗಿ ಕೊನೆ ಐದು ದಿನಗಳಲ್ಲಿ ಹೀನ ಮಟ್ಟಕ್ಕಿಳಿದ ಪ್ರತಿ ಪಕ್ಷಗಳು ಹಣದ ಹೊಳೆಯನ್ನೇ ಹರಿಸಿದರು ಎಂದು ಬೇಸರ ವ್ಯಕ್ತಪಡಿಸಿದರು ನಮ್ಮ ಪಕ್ಷದ ಕಾರ್ಯಕರ್ತರು ನಮಗೆ ನಮ್ಮ ಸಾಂಪ್ರದಾಯಿಕ ಮತಗಳನ್ನು ಕೊಟ್ಟಿದ್ದಾರೆ ಆದರೂ ಸಹ ಅಲ್ಪ ಮತಗಳಿಂದ ಸೋಲಾಗಿದೆ ಈ ಚುನಾವಣೆ ಹಣದ ಬಲದಿಂದ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು .
