
ಆಲೂರು : ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ ಮಾತನಾಡಿ ಲಯನ್ಸ್ ಕ್ಲಬ್ ವತಿಯಿಂದ ವತಿಯಿಂದ ಪ್ರತಿ ತಿಂಗಳು ಸಂಸ್ಥೆ ವತಿಯಿಂದ ವಿವಿಧ ರೀತಿಯಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಅದರಂತೆ ಈ ತಿಂಗಳು ನೀಚನಹಳ್ಳಿ ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಪರೀಕ್ಷೆಯ ಹಿತಾ ದೃಷ್ಟಿಯಿಂದ ರೇಟಿಂಗ್ ಪ್ಯಾಡ್ ವಿತರಣೆ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ, ಖಜಾಂಚಿ ರಮೇಶ್ ಕುರೇಗಲ್, ಕಾರ್ಯದರ್ಶಿ ಕುಮಾರ್ ಬೆಂಬಳೂರು, ನಿಕಟ ಪೂರ್ವ ಅಧ್ಯಕ್ಷ ಹರೀಶ್, ಸದಸ್ಯ ಮೋಹನ್ ಕಾಡ್ಲುರು, ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ರಾಜು, ಮುಖ್ಯ ಶಿಕ್ಷಕಿ ರೇಣುಖ, ಸಹ ಶಿಕ್ಷಕಿ ದೀಪ ಹೆಚ್.ಸಿ, ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರುಗಳು ಮಕ್ಕಳು ಉಪಸ್ಥಿತರಿದ್ದರು.




